ಕರ್ನಾಟಕ ವಿಧಾನಸಭಾ ಚುನಾವಣೆ: ಕೊನೆಯ ಕ್ಷಣದಲ್ಲಿ ಎಡವಿತೇ ಕಾಂಗ್ರೆಸ್?

ಬೆಂಗಳೂರು, ಮೇ 04: ಸೋಲಿನ ಭೀತಿಯಲ್ಲಿದ್ದ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಒಮ್ಮೇಲೆ ಮೈಕೊಡವಿ ಎದ್ದಿದ್ದಾರೆ. ಅದಕ್ಕೆ ಕಾರಣವಾಗಿರುವುದು ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಕೊಟ್ಟಿರುವ ತನ್ನ ಪ್ರಣಾಳಿಕೆ. 

ಇದೀಗ ಬಿಜೆಪಿ ನಾಯಕರು ತಮ್ಮ ಪಕ್ಷದ ಪ್ರಣಾಳಿಕೆಗಿಂದ ಹೆಚ್ಚಾಗಿ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆಯೆ ಮಾತನಾಡುತ್ತಿದ್ದಾರೆ. ಜೊತೆಗೆ ರಾಜ್ಯಾದ್ಯಂತ ಹಿಂದೂ ಸಂಘಟನೆಗಳು ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ‘ಹನುಮಾನ್ ಚಾಲೀನಾ’ ಪಠಣೆ ಮಾಡುತ್ತಿವೆ. ಬಿಜೆಪಿಯ ಈ ಚುನಾವಣಾ ರಣೋತ್ಸಾಹಕ್ಕೆ ಕಾರಣವಾಗಿದ್ದಾದರೂ ಏನು?

ಮುಂದಿದೆ ಸಂಪೂರ್ಣ ಮಾಹಿತಿ.

ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲುವ ಅತ್ಯುತ್ಸಾಹದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ತಮ್ಮ ವಿಧಾನಸಭಾ ಚುನಾವಣೆ ಪ್ರಣಾಳಿಕೆ ಹಿನ್ನಡೆಯನ್ನುಂಟು ಮಾಡಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ನಡೆದಿವೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಭಜರಂಗದಳ ನಿಷೇಧ ವಿಚಾರ  ರಾಜಕೀಯವಾಗಿ ಹಿನ್ನಡೆಗೆ ಕಾರಣವಾಗುವ ಸಾಧ್ಯತೆಗಳು ಕಂಡು ಈಗ ಬರುತ್ತಿವೆ. ಬಿಜೆಪಿ, ಸಂಘ ಪರಿವಾರ ಸೇರಿದಂತೆ ಹಿಂದೂ ಸಂಘಟನೆಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಉಳಿದ 5 ದಿನಗಳ ಪ್ರಚಾರ ಮಾಡುವ ಪೂರ್ವ ತಯಾರಿ ಮಾಡಿಕೊಂಡಂತಿದೆ. ಅದರ ಮೊದಲ ಭಾಗವಾಗಿ ಈಗಾಗಲೇ ಹನುಮಾನ್ ಚಾಲಿಸಾ ಪಠಣವನ್ನು ಭಜರಂಗದಳ, ವಿಶ್ವಹಿಂದೂ ಪರಿಷತ್ ಸೇರಿದಂತೆ ಇನ್ನಿತರ ಹಿಂದೂ ಸಂಘಟನೆಗಳ ಬೆಂಬಲದಿಂದ ‘ಹನುಮಾನ್ ಚಾಲಿಸಾ’ ಪಠಣ ರಾಜ್ಯಾದ್ಯಂತ ಶುರುವಾಗಿದೆ.

ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳು ರಾಜ್ಯಾದ್ಯಂತ ಏಕಕಾಲಕ್ಕೆ ಹನುಮಾನ್ ಚಾಲಿಸಾ ಪಠನ ಆರಂಭಿಸಿವೆ. ಬೆಂಗ

ಳೂರು, ಮಂಗಳೂರು, ಶಿವಮೊಗ್ಗ, ಬೀದರ್, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇಡೀ ರಾಜ್ಯಾದ್ಯಂತ ಇಂದು ಸಂಜೆ 7 ಗಂಟೆಗೆ ಹನುಮಾನ್ ಚಾಲಿಸಾ ಪಾರಾಯಣ ಆರಂಭಿಸಿವೆ. ಹಿಂದು ಸಂಘಟನೆಗಳು ಕಾಂಗ್ರೆಸ್ ಪ್ರಣಾಳಿಕೆಯನ್ನು ಖಂಡಿಸಿ ಪಠಣ ಆರಂಭಿಸಿದ್ದರೂ ಅದರ ಲಾಭ ಬಿಜೆಪಿ ಆಗುವುದು ಎಲ್ಲರೂ ತಿಳಿದಿರುವ ಸಂಗತಿಯೇ. 

ಹೀಗಾಗಿ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಚಾಲನೆ ಕೊಟ್ಟಿರುವ ಹನುಮಾನ್ ಚಾಲಿಸಾ ಪಾರಾಯಣಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಬಜರಂಗದಳದ ನಿಷೇಧಕ್ಕೂ ಹನುಮ ಭಕ್ತರಿಗೆ ಒಂದಕ್ಕೊಂದು ಸಂಬಂಧವಿಲ್ಲ. ಸಮಾಜಘಾತುಕ ಶಕ್ತಿಯನ್ನು ಬಗ್ಗುಬಡಿಯುವುದಾಗಿ ನಾವು ಹೇಳಿದ್ದೇವೆ. ನಮ್ಮ ಪ್ರಣಾಳಿಕೆಗೆ ನಾವು ಬದ್ಧರಾಗಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಈಗಾಗಲೇ ನಿಷೇಧಕ್ಕೆ ಒಳಗಾಗಿರುವ ಪಿಎಫ್​ಐ ಸಂಘಟನೆಯೊಂದಿಗೆ ಬಜರಂಗದಳವನ್ನು ಹೋಲಿಕೆ ಮಾಡಿರುವುದಕ್ಕೆ ಹಿಂದು ಪರ ಸಂಘಟನೆಗಳು, ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿವೆ.    

ಮುಂದಿನ ಸಿಎಂ ತಾವೇ ಎಂದು ಘೊಷಣೆ ಹಾಕಿಸಿಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮ

ಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಈ ವಿರೋಧದ ಅರಿವು ಆಗುತ್ತಿದ್ದಂತೆಯೆ ತಮ್ಮ ಪ್ರಣಾಳೆಕೆಯನ್ನು ಸಮರ್ಥಿಸಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರೇ ಈ ವಿಷಯದ ಕುರಿತು ಒಳಗೊಳಗೆ 

ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕುರಿತು ‘ನಿಮಿತ್ತ ಡಾಟ್ ಕಾಮ್​’ಗೆ ಮಾಹಿತಿ ಸಿಕ್ಕಿದೆ. 

ಅಷ್ಟಕ್ಕೂ ಹನುಮಾನ್  ಚಾಲಿಸಾದಲ್ಲಿ ಏನಿದೆ?

ನೀವು ಹನುಮಾನ್ ಚಾಲಿಸಾವನ್ನು ಪಠಣ ಮಾಡಿಲ್ಲ ಅಥವಾ ಓದಿಲ್ಲವಾದರೆ ಇಲ್ಲಿದೆ ಹನುಮಾನ್ ಚಾಲೀಸಾ:

ದೋಹಾ

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।

ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥

ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।

ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥

ಚೌಪಾಈ

ಜಯ ಹನುಮಾನ ಜ್ಞಾನ ಗುಣ ಸಾಗರ ।

ಜಯ ಕಪೀಶ ತಿಹು ಲೋಕ ಉಜಾಗರ ॥ 1 ॥

ರಾಮದೂತ ಅತುಲಿತ ಬಲಧಾಮಾ ।

ಅಂಜನಿ ಪುತ್ರ ಪವನಸುತ ನಾಮಾ ॥ 2 ॥

ಮಹಾವೀರ ವಿಕ್ರಮ ಬಜರಂಗೀ ।

ಕುಮತಿ ನಿವಾರ ಸುಮತಿ ಕೇ ಸಂಗೀ ॥3 ॥

ಕಂಚನ ವರಣ ವಿರಾಜ ಸುವೇಶಾ ।

ಕಾನನ ಕುಂಡಲ ಕುಂಚಿತ ಕೇಶಾ ॥ 4 ॥

ಹಾಥವಜ್ರ ಔ ಧ್ವಜಾ ವಿರಾಜೈ ।

ಕಾಂಥೇ ಮೂಂಜ ಜನೇವೂ ಸಾಜೈ ॥ 5॥

ಶಂಕರ ಸುವನ ಕೇಸರೀ ನಂದನ ।

ತೇಜ ಪ್ರತಾಪ ಮಹಾಜಗ ವಂದನ ॥ 6 ॥

ವಿದ್ಯಾವಾನ ಗುಣೀ ಅತಿ ಚಾತುರ ।

ರಾಮ ಕಾಜ ಕರಿವೇ ಕೋ ಆತುರ ॥ 7 ॥

ಪ್ರಭು ಚರಿತ್ರ ಸುನಿವೇ ಕೋ ರಸಿಯಾ ।

ರಾಮಲಖನ ಸೀತಾ ಮನ ಬಸಿಯಾ ॥ 8॥

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ ।

ವಿಕಟ ರೂಪಧರಿ ಲಂಕ ಜಲಾವಾ ॥ 9 ॥

ಭೀಮ ರೂಪಧರಿ ಅಸುರ ಸಂಹಾರೇ ।

ರಾಮಚಂದ್ರ ಕೇ ಕಾಜ ಸಂವಾರೇ ॥ 10 ॥

ಲಾಯ ಸಂಜೀವನ ಲಖನ ಜಿಯಾಯೇ ।

ಶ್ರೀ ರಘುವೀರ ಹರಷಿ ಉರಲಾಯೇ ॥ 11 ॥

ರಘುಪತಿ ಕೀನ್ಹೀ ಬಹುತ ಬಡಾಯೀ ।

ತುಮ ಮಮ ಪ್ರಿಯ ಭರತ ಸಮ ಭಾಯೀ ॥ 12 ॥

ಸಹಸ್ರ ವದನ ತುಮ್ಹರೋ ಯಶಗಾವೈ ।

ಅಸ ಕಹಿ ಶ್ರೀಪತಿ ಕಂಠ ಲಗಾವೈ ॥ 13 ॥

ಸನಕಾದಿಕ ಬ್ರಹ್ಮಾದಿ ಮುನೀಶಾ ।

ನಾರದ ಶಾರದ ಸಹಿತ ಅಹೀಶಾ ॥ 14 ॥

ಯಮ ಕುಬೇರ ದಿಗಪಾಲ ಜಹಾಂ ತೇ ।

ಕವಿ ಕೋವಿದ ಕಹಿ ಸಕೇ ಕಹಾಂ ತೇ ॥ 15 ॥

ತುಮ ಉಪಕಾರ ಸುಗ್ರೀವಹಿ ಕೀನ್ಹಾ ।

ರಾಮ ಮಿಲಾಯ ರಾಜಪದ ದೀನ್ಹಾ ॥ 16 ॥

ತುಮ್ಹರೋ ಮಂತ್ರ ವಿಭೀಷಣ ಮಾನಾ ।

ಲಂಕೇಶ್ವರ ಭಯೇ ಸಬ ಜಗ ಜಾನಾ ॥ 17 ॥

ಯುಗ ಸಹಸ್ರ ಯೋಜನ ಪರ ಭಾನೂ ।

ಲೀಲ್ಯೋ ತಾಹಿ ಮಧುರ ಫಲ ಜಾನೂ ॥ 18 ॥

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ।

ಜಲಧಿ ಲಾಂಘಿ ಗಯೇ ಅಚರಜ ನಾಹೀ ॥ 19 ॥

ದುರ್ಗಮ ಕಾಜ ಜಗತ ಕೇ ಜೇತೇ ।

ಸುಗಮ ಅನುಗ್ರಹ ತುಮ್ಹರೇ ತೇತೇ ॥ 20 ॥

ರಾಮ ದುಆರೇ ತುಮ ರಖವಾರೇ ।

ಹೋತ ನ ಆಜ್ಞಾ ಬಿನು ಪೈಸಾರೇ ॥ 21 ॥

ಸಬ ಸುಖ ಲಹೈ ತುಮ್ಹಾರೀ ಶರಣಾ ।

ತುಮ ರಕ್ಷಕ ಕಾಹೂ ಕೋ ಡರ ನಾ ॥ 22 ॥

ಆಪನ ತೇಜ ಸಮ್ಹಾರೋ ಆಪೈ ।

ತೀನೋಂ ಲೋಕ ಹಾಂಕ ತೇ ಕಾಂಪೈ ॥ 23 ॥

ಭೂತ ಪಿಶಾಚ ನಿಕಟ ನಹಿ ಆವೈ ।

ಮಹವೀರ ಜಬ ನಾಮ ಸುನಾವೈ ॥ 24 ॥

ನಾಸೈ ರೋಗ ಹರೈ ಸಬ ಪೀರಾ ।

ಜಪತ ನಿರಂತರ ಹನುಮತ ವೀರಾ ॥ 25 ॥

ಸಂಕಟ ಸೇ ಹನುಮಾನ ಛುಡಾವೈ ।

ಮನ ಕ್ರಮ ವಚನ ಧ್ಯಾನ ಜೋ ಲಾವೈ ॥ 26 ॥

ಸಬ ಪರ ರಾಮ ತಪಸ್ವೀ ರಾಜಾ ।

ತಿನಕೇ ಕಾಜ ಸಕಲ ತುಮ ಸಾಜಾ ॥ 27 ॥

ಔರ ಮನೋರಧ ಜೋ ಕೋಯಿ ಲಾವೈ ।

ತಾಸು ಅಮಿತ ಜೀವನ ಫಲ ಪಾವೈ ॥ 28 ॥

ಚಾರೋ ಯುಗ ಪ್ರತಾಪ ತುಮ್ಹಾರಾ ।

ಹೈ ಪ್ರಸಿದ್ಧ ಜಗತ ಉಜಿಯಾರಾ ॥ 29 ॥

ಸಾಧು ಸಂತ ಕೇ ತುಮ ರಖವಾರೇ ।

ಅಸುರ ನಿಕಂದನ ರಾಮ ದುಲಾರೇ ॥ 30 ॥

ಅಷ್ಠಸಿದ್ಧಿ ನವ ನಿಧಿ ಕೇ ದಾತಾ ।

ಅಸ ವರ ದೀನ್ಹ ಜಾನಕೀ ಮಾತಾ ॥ 31 ॥

ರಾಮ ರಸಾಯನ ತುಮ್ಹಾರೇ ಪಾಸಾ ।

ಸದಾ ರಹೋ ರಘುಪತಿ ಕೇ ದಾಸಾ ॥ 32 ॥

ತುಮ್ಹರೇ ಭಜನ ರಾಮಕೋ ಪಾವೈ ।

ಜನ್ಮ ಜನ್ಮ ಕೇ ದುಖ ಬಿಸರಾವೈ ॥ 33 ॥

ಅಂತ ಕಾಲ ರಘುಪತಿ ಪುರಜಾಯೀ ।

ಜಹಾಂ ಜನ್ಮ ಹರಿಭಕ್ತ ಕಹಾಯೀ ॥ 34 ॥

ಔರ ದೇವತಾ ಚಿತ್ತ ನ ಧರಯೀ ।

ಹನುಮತ ಸೇಯಿ ಸರ್ವ ಸುಖ ಕರಯೀ ॥ 35 ॥

ಸಂಕಟ ಕ(ಹ)ಟೈ ಮಿಟೈ ಸಬ ಪೀರಾ ।

ಜೋ ಸುಮಿರೈ ಹನುಮತ ಬಲ ವೀರಾ ॥ 36 ॥

ಜೈ ಜೈ ಜೈ ಹನುಮಾನ ಗೋಸಾಯೀ ।

ಕೃಪಾ ಕರಹು ಗುರುದೇವ ಕೀ ನಾಯೀ ॥ 37 ॥

ಜೋ ಶತ ವಾರ ಪಾಠ ಕರ ಕೋಯೀ ।

ಛೂಟಹಿ ಬಂದಿ ಮಹಾ ಸುಖ ಹೋಯೀ ॥ 38 ॥

ಜೋ ಯಹ ಪಡೈ ಹನುಮಾನ ಚಾಲೀಸಾ ।

ಹೋಯ ಸಿದ್ಧಿ ಸಾಖೀ ಗೌರೀಶಾ ॥ 39 ॥

ತುಲಸೀದಾಸ ಸದಾ ಹರಿ ಚೇರಾ ।

ಕೀಜೈ ನಾಥ ಹೃದಯ ಮಹ ಡೇರಾ ॥ 40 ॥

ದೋಹಾ

ಪವನ ತನಯ ಸಂಕಟ ಹರಣ – ಮಂಗಳ ಮೂರತಿ ರೂಪ್ ।

ರಾಮ ಲಖನ ಸೀತಾ ಸಹಿತ – ಹೃದಯ ಬಸಹು ಸುರಭೂಪ್ ॥

ಸಿಯಾವರ ರಾಮಚಂದ್ರಕೀ ಜಯ । ಪವನಸುತ ಹನುಮಾನಕೀ ಜಯ । ಬೋಲೋ ಭಾಯೀ ಸಬ ಸಂತನಕೀ ಜಯ ।

Leave a Reply

Your email address will not be published. Required fields are marked *